News

ಹಿಂ.ಜಾ.ವೇ ಜಿಲ್ಲಾಧ್ಯಕ್ಷ ಕಲ್ಲಡ್ಕ ರತ್ನಾಕರ ಶೆಟ್ಟಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ತಡೆ

ಬಂಟ್ವಾಳ ಜ 09: ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಕಲ್ಲಡ್ಕ ರತ್ನಾಕರ ಶೆಟ್ಟಿ ಅವರ ಗಡೀಪಾರು ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಕಟಣೆ ತಿಳಿಸಿದೆ .ಕೆಲದಿನಗಳ ಹಿಂದೆ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಶಿಫಾರಸಿನ ಮೇರೆಗೆ‌ಜಿಲ್ಲಾಧಿಕಾರಿಯವರು ರತ್ನಾಕರ ಶೆಟ್ಟಿ ಸಹಿತ ಇಬ್ಬರಿಗೆ‌ ಗಡೀಪಾರುಗೊಳಿಸಿ ಆದೇಶಿಸಿತ್ತು.‌ಈ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದ್ದು,ಈ ದಾವೆಯ ವಿಚಾರಣೆ ನಡಸಿದ‌ಕೋಟ್೯ ಜಿಲ್ಲಾಧಿಕಾರಿಯವರ ಆದೇಶಕ್ಕೆ ತಡೆಯಾಜ್ಙೆ ನೀಡಿ ಆದೇಶಿಸಿದೆ.

ಹೈಕೋರ್ಟ್ ನಲ್ಲಿ ವಕೀಲರಾದ ಅರುಣಶ್ಯಾಮ ಅವರು ರತ್ನಾಕರ ಶೆಟ್ಟಿ ಪರ ವಾದಿಸಿದ್ದರು, ಹಿಂಜಾವೇ ನೇತೃತ್ವದಲ್ಲಿ ಗಡೀಪಾರಿನ ವಿರುದ್ಧ ಬಂಟ್ವಾಳ ತಹಶೀಲ್ದಾರ್ ಕಚೇರಿ ಮುಂಭಾಗ ಜ.1ರಿಂದ 6ರವರೆಗೆ ನಡೆದ ನಿರಂತರವಾಗಿ ಸತ್ಯಾಗ್ರಹ‌ ನಡೆಸಿತ್ತು.‌ ಇದರಲ್ಲಿ ಭಾಗವಹಿಸಿದ್ದ ಹಿಂಜಾವೇ, ವಿಹಿಂಪ, ಬಿಜೆಪಿ, ಹಿಂಜಾವೇ ಮಹಿಳಾ ವೇದಿಕೆ ಕಾರ್ಯಕರ್ತರು,ನಾಯಕರಿಗೆ ಹಿಂದು ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಕೃತಜ್ಞತೆ ಸಲ್ಲಿಸಿದ್ದಾರೆ.