News

'ಧರ್ಮಸಂಸದ್ ಗೆ ನೋ, ಸಮಾವೇಶಕ್ಕೆ ಯಸ್' -ಕೊಲ್ಲೂರಿನಲ್ಲಿ ಸಿಎಂ ನಿಂದ ಅಧಿಕಾರ ದುರುಪಯೋಗ- ವಿ.ಹಿಂ.ಪ ಗರಂ

 

ಉಡುಪಿ ಜ 09 : ಇಲ್ಲಿ ಧರ್ಮ ಸಂಸದ್ ನಡೆದಾಗ ಊಟದ ವ್ಯವಸ್ಥೆ ನೀಡದ ಕೊಲ್ಲೂರು ದೇವಾಲಯ ಕಾಂಗ್ರೆಸ್ ಸಾಧನ ಸಮಾವೇಶಕ್ಕೆ ಉಟದ ವ್ಯವಸ್ಥೆ ನೀಡಿರುವುದು ಹಿಂದೂ ನಾಸ್ತಿಕರ ಕೋಪಕ್ಕೆ ಎಡೆ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಅವರು ಅಧಿಕಾರ ದುರಪಯೋಗ ಮಾಡಿಕೊಂಡು ಕೊಲ್ಲೂರು ದೇವಾಲಯದಿಂದ ಸಮಾವೇಶಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಈ ಬಗ್ಗೆ ಜ 9 ರ ಮಂಗಳವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾದ್ಯಕ್ಷ ವಿಲಾಸ್ ನಾಯ್ಕ್ ಅವರು ಮಾಹಿತಿ ನೀಡಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಉಡುಪಿಯಲ್ಲಿ ಆಯೋಜಿಸಿದ ಧರ್ಮಸಂಸದ್ ಗೆ ದೇಶ ವಿದೇಶಗಳಿಂದ ಬಂದಿರುವ 2000ಕ್ಕೂ ಅಧಿಕ ಸಾಧು ಸಂತರಿಗೆ ಹಾಗೂ ಹಿಂದೂ ಭಾಂದವರಿಗೆ ಊಟದ ವ್ಯವಸ್ಥೆ ಮಾಡುವಂತೆ ಕೊಲ್ಲೂರು ಹಾಗೂ ಕಟೀಲು ದೇವಾಲಯಕ್ಕೆ ಮನವಿ ಮಾಡಲಾಗಿತ್ತು. ಆದ್ರೆ ಈ ಎರಡೂ ದೇವಾಲದ ಆಡಳಿತ ಸಿಬ್ಬಂದಿಗಳು ಊಟದ ವ್ಯವಸ್ಥೆ ನೀಡಲು ನಿರಾಕರಿಸಿತ್ತು. ಯಾವುದೇ ಸಭೆ ಸಮಾರಂಭಗಳಿಗೆ ಉಟದ ವವ್ಯಸ್ಥೆ ನೀಡಲು ಸರಕಾರ ಅನುಮತಿ ನೀಡುವುದಿಲ್ಲ ಎಂಬ ಮಾಹಿತಿಯನ್ನು ದೇವಸ್ಥಾನದ ಆಡಳಿತ ಸಿಬ್ಬಂದಿಗಳು ಮೌಖಿಕವಾಗಿ ನೀಡಿದ್ದರು .ಆದ್ರೆ ಕೊಲ್ಲೂರು ದೇವಾಲಯ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಸಿಲುಕಿ ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಉಟದ ವವ್ಯಸ್ಥೆಯನ್ನು ಮಾಡಿದೆ. ಸಿ ಎಂ ಸಿದ್ದರಾಮಯ್ಯ ತಮ್ಮ ಅಧಿಕಾರ ದುರಪಯೋಗ ಮಾಡಿದ್ದಾರೆ. ಇನ್ನೂ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ಊಟದ ವ್ಯವಸ್ಥೆಯನ್ನು ತನ್ನ ರಾಜಕೀಯ ಕಾರಣಕ್ಕಾಗಿ ರದ್ದುಗೊಳಿಸಿದ್ದಾರೆ. ಸಿ ಎಂ ಸಿದ್ದರಾಮಯ್ಯ ಅವರು ಹಿಂದೂಗಳ ಬಗ್ಗೆ ಇಬ್ಬಗೆಯ ನೀತಿ ಅನುಸರಿಸುತ್ತಿದ್ಧಾರೆ. ಹಿಂದೂಗಳನ್ನು ನಿರಂತರ ಧಮನ ನಡೆಸುವ ಕೆಲಸ ಸಿ ಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇನ್ನೂ ಸಿ ಎಂ ಸಿದ್ದರಾಮಯ್ಯ ಅವರಂತೆ ಅವರ ಮಂತ್ರಿಗಳು ಕೂಡಾ ಹಿಂದೂಗಳ ಬಗ್ಗೆ ನಿರಾಶಕ್ತಿ ಹೊಂದಿದ್ದಾರೆ.

ಉಡುಪಿಯಲ್ಲಿ ನಡೆದ ದರ್ಮ ಸಂಸದ್‍ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್, ನಗರಸಭೆ ಅದ್ಯಕ್ಷ ಮೀನಾಕ್ಷೀ ಮಾದವ ಬನ್ನಂಜೆ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಧರ್ಮ ಸಂಸದ್ ರಾಜಕೀಯ ರಹಿತ ಸಮಾವೇಶ ಆದ ಹಿನ್ನಲೆಯಲ್ಲಿ ಎಲ್ಲಾರಿಗೂ ಆಹ್ವಾನ ನೀಡಲಾಗಿತ್ತು. ಬಿಜೆಪಿ ಪಕ್ಷದ ನಾಯಕರು ಹಿಂದೂ ಎಂಬ ನೆಲೆಯಲ್ಲಿ ದರ್ಮ ಸಂಸದ್‍ನಲ್ಲಿ ಭಾಗವಹಿಸಿದ್ದಾರೆ. ಬಿಜೆಪಿಗರಿಗೆ ಎಲ್ಲಿಯೂ ಸಮಾವೇಶದಲ್ಲಿ ಮಣೆ ಹಾಕಿಲ್ಲ. ಆದ್ರೆ ಕಾಂಗ್ರೆಸ್ಸಿನ ಜನಪ್ರತಿನಿಧಿಗಳು ಧರ್ಮ ಸಂಸದ್‍ನಲ್ಲಿ ಭಾಗವಹಿಸಿಲ್ಲ. ಭಾಗವಹಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಅವರಿಗೆ ಹಿಂದೂ ಧರ್ಮದ ಮೇಲೆ ಯಾಕೆ ಇಷ್ಟು ಕೋಪ ಅಂತಾ ಗೊತ್ತಿಲ್ಲ. ಸರಕಾರ ಹಿಂದೂಗಳ ಬಗ್ಗೆ ವಿರೋಧ ನೀತಿಯನ್ನು ಅನುಸರಿಸುವುದು ತಪ್ಪು . ಇನ್ನೂ ಕೊಲ್ಲೂರು ದೇವಾಲಯ ಕಾಂಗ್ರೆಸ್ ಸಾಧನ ಸಮಾವೇಶಕ್ಕೆ ಊಟದ ವ್ಯವಸ್ಥೆ ಕಲ್ಪಿಸಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.