News

ಸುರತ್ಕಲ್ : ಹಿಂ.ಜಾ.ವೇ ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ- ಪ್ರಕರಣಕ್ಕೆ ಟ್ವಿಸ್ಟ್- ದೂರಿನ ಬಗ್ಗೆಯೇ ಎದ್ದಿದೆ ಸಂಶಯ

ಸುರತ್ಕಲ್ ಜ 09: ಸುರತ್ಕಲ್ ರೈಲ್ವೇ ಸೇತುವೆ ಬಳಿ ಹಿಂದೂ ಜಾಗರಣಾ ವೇದಿಕೆ ಸಹಸಂಚಾಲಕ ಭರತ್‌ ಅಗರಮೇಲು ಅವರು ತನ್ನ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಆ ಪ್ರಕರಣ ತಿರುವು ಪಡೆದುಕೊಂಡಿದೆ. ದೂರಿನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ದೂರಿನಲ್ಲಿ ನೀಡಿರುವ‌ ಮಾಹಿತಿಗೂ ದೂರುದಾರರ ವಿಚಾರಣೆ ವೇಳೆ ನೀಡುತ್ತಿರುವ ಹೇಳಿಕೆಗೂ ಹೋಲಿಕೆ‌ಯಾಗುತ್ತಿಲ್ಲ ಎಂದಿದ್ದಾರೆ. ದೂರುದಾರ ಭರತ್ ನೀಡಿರುವ ದೂರಿನ ಕುರಿತು ಈಗ ಸಂಶಯ ಉಂಟಾಗಿದೆ ಈ ಕುರಿತು ಕೂಡಾ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ‌ ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

ಘಟನೆಯ ಬಗ್ಗೆ
ಕೇಬಲ್‌ ಕೆಲಸದಲ್ಲೂ ತೊಡಗಿಸಿಕೊಂಡಿದ್ದ ಭರತ್‌ ರಾತ್ರಿ ಮನೆಗೆ ತೆರಳುವ ಸಂದರ್ಭ ಪೊದೆಯಿಂದ ಹೊರಬಂದ ನಾಲ್ಕು ಮಂದಿ ಹಲ್ಲೆಗೆ ಯತ್ನಿಸಿದ್ದಾರೆ.ಪೊದೆಯಲ್ಲಿ ಅಡಗಿದ್ದವರು ಏಕಾಏಕಿ ಮೇಲೇಳುತ್ತಿದ್ದಂತೆ ಬೆ„ಕ್‌ ಸ್ಥಳದಲ್ಲೇ ಬಿಟ್ಟು ಓಡಿದ ಪರಿಣಾಮ ತಾನು ಅಪಾಯದಿಂದ ಪಾರಾಗಿದ್ದೇನೆ. ದೀಪಕ್‌ ರಾವ್‌ ಹತ್ಯೆಯ ಬಳಿಕ ತಾನು ಮುಂಜಾಗರೂಕತೆಯಿಂದ ಹೋಗುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ಸಿಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಸುರತ್ಕಲ್‌ ಠಾಣೆಯಲ್ಲಿ ಭರತ್‌ ಅವರು ಈ ಬಗ್ಗೆ ದೂರು ನೀಡಿದ್ದರು.