News

ಹಾನಗಲ್ : ಅಪಘಾತದಲ್ಲಿ ಬೈಕ್ ಸವಾರ ಸಾವು- ನೊಂದ ಸ್ವಾಮೀಜಿ ಆತ್ಮಹತ್ಯೆ

ಹಾನಗಲ್ ಜ 08 : ಇಲ್ಲಿನ ಹುಲ್ಲತ್ತಿಯ ಮಹಾಂತ ಸ್ವಾಮೀಜಿ ಕಳೆದ ಎರಡು ದಿನಗಳ ಹಿಂದೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೈಕ್ ಸವಾರನೊಬ್ಬನಿಗೆ ಡಿಕ್ಕಿಯಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದ. ಇದರಿಂದ ತೀವ್ರವಾಗಿ ಮನನೊಂದಿದ್ದ ಸ್ವಾಮೀಜಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಸ್ವಾಮೀಜಿ ಹಾನಗಲ್‌ನಿಂದ ಹುಬ್ಬಳ್ಳಿಗೆ ಕಾರು ಚಲಾಯಿಸಿಕೊಂಡು ಹೋಗುವಾಗ ತಡಸ ಗ್ರಾಮದ ಬಳಿ ಬೈಕ್ ಸವಾರನೊಬ್ಬನಿಗೆ ಅಪಘಾತ ಆಗಿತ್ತು. ಈ ಹಿನ್ನೆಲೆಯಲ್ಲಿ ತಡಸ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಸೂಕ್ಷ್ಮ ಸ್ವಭಾವದ ಸ್ವಾಮೀಜಿ ತಡರಾತ್ರಿ ಹುಲ್ಲತ್ತಿ ಗ್ರಾಮದ ಹೊರವಲಯದ ದಿಂಗಾಲೇಶ್ವರ ಶ್ರಿಗಳ ಶಾಖಾ ಮಠದಲ್ಲಿ ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಹುಲ್ಲತ್ತಿ ಮಠವು ಬಾಲೆಹೊಸುರಿನ ದಿಂಗಾಲೇಶ್ವರ ಮಠದ ಶಾಖಾ ಮಠವಾಗಿದೆ.