News

ಮೈಸೂರು: ಮಾಜಿ ಸಿಎಂಗಳಿಬ್ಬರ ವಾಗ್ವಾದ-ಕುಮಾಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು, ಆ 26 (DaijiworldNews/SM): ಮಾಜಿ ಸಿಎಂಗಳಿಬ್ಬರ ವಾಗ್ವಾದ ಮುಂದುವರೆದಿದೆ. ಕುಮಾರಸ್ವಾಮಿ ವಿರುದ್ಧ ಮತ್ತೆ ಸಿದ್ದರಾಮಯ್ಯ ಗುಡುಗಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ನನ್ನನ್ನು ಶತ್ರುವಿನಂತೆ ಕಂಡಿದ್ದಾರೆ. ನನ್ನನ್ನು ಸ್ನೇಹಿತನಂಟೆ ಕಂಡಿದ್ದರೆ, ನನ್ನ ವಿರುದ್ಧ ಅನುಮಾನ ಪಡುತ್ತಿರಲಿಲ್ಲ. ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರಲಿಲ್ಲ. ಅವರು ನನ್ನನ್ನು ಶತ್ರು ಎಂದುಕೊಂಡು ದ್ವೇಷ ಸಾಧಿಸುತ್ತಲೇ ಬಂದಿದ್ದಾರೆ ಎಂದರು.

ನಾನು ಕಾಂಗ್ರೆಸ್ ಮುಖಂಡನಾಗಿದ್ದರೂ ಸಮ್ಮಿಶ್ರ ಸರಕಾರದಲ್ಲಿ ಸಮನ್ವಯ ಸಮಿತಿಯ ಮುಖಂಡನಾಗಿದ್ದೆ. ಕನಿಷ್ಠ ಪಕ್ಷ ಮೈತ್ರಿ ಪಕ್ಷದ ನಾಯಕನಂತೆಯೂ ನನ್ನನ್ನು ನಡೆಸಿಕೊಳ್ಳಲಿಲ್ಲ. ಆದ್ದರಿಂದಲೇ, “ಸಿದ್ದರಾಮಯ್ಯನವರು ನನ್ನನ್ನು ಕ್ಲರ್ಕ್ ನಂತೆ ನೋಡಿಕೊಂಡಿದ್ದರು" ಎಂಬ ಮಾತುಗಳು ಕುಮಾರಸ್ವಾಮಿಯವರಿಂದ ಬಂದಿದೆ ಎಂದರು.