News

ಉಳ್ಳಾಲ: ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಯುವತಿಯ ಶವದ ಗುರುತು ಪತ್ತೆ

ಉಳ್ಳಾಲ, ಆ 25 (DaijiworldNews/SM): ಇಲ್ಲಿನ ಮುಕ್ಕಚ್ಚೇರಿ ಸಮುದ್ರ ತೀರದಲ್ಲಿ ಪತ್ತೆಯಾದ ಯುವತಿಯ ಶವದ ಗುರುತು ಪತ್ತೆಯಾಗಿದೆ. ಮಂಗಳೂರಿನ ಉರ್ವಸ್ಟೋರ್ ನಲ್ಲಿ ವಾಸವಾಗಿದ್ದ ಪ್ರೇರಣಾ ಖೇಣಿ(22) ಎಂಬುವವರ ಮೃತದೇಹ ಎಂದು ದೃಢಪಟ್ಟಿದೆ.

ಆಶಾ ಖೇಣಿ, ಮೂಲತ: ಗೋವಾ ಮಡ್ ಗಾಂವ್ ನಿವಾಸಿಯಾಗಿದ್ದರು ಎಂದು ತಿಳಿದು ಬಂದಿದೆ. ಮಂಗಳೂರಿನಲ್ಲಿ ಏಕಾಂಗಿಯಾಗಿ ವಾಸವಿದ್ದಳು. ಕುಡಿತದ ಚಟ ಹೊಂದಿದ್ದ ಈಕೆ, ಪಣಂಬೂರು ಸಮುದ್ರ ತೀರದಲ್ಲಿ ಆತ್ಮಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.