News

ಗರ್ಭಿಣಿಯಾದ ನಾತಿಚರಾಮಿ ಬೆಡಗಿ-ಇದು ರೀಲ್ ಅಲ್ಲ ರಿಯಲ್

ಬೆಂಗಳೂರು,ಜು 17 (Daijiworld News/RD): ಸ್ಯಾಂಡಲವುಡ್ ಬೆಡಗಿ, ಮೀಟೂ ಅಭಿಯಾನದ ಮೂಲಕ ಸುದ್ದಿಯಾಗಿದ್ದ ಶ್ರುತಿ ಹರಿಹರನ್ ಗರ್ಭಿಣಿಯಾಗಿದ್ದು, ಈ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

ಶ್ರುತಿಹರಿಹರನ್ ತನ್ನ ತಾಯಿಯ್ತನದ ಬ್ಲರ್ ಪೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ, ತಾಯ್ತನವು ನನ್ನ ಜೀವನದ ಮಹತ್ವದ ಘಟ್ಟ ಆಗಿದ್ದು, ನಿನ್ನನ್ನು ನೋಡಲು ಕಾತುರರಾಗಿದ್ದೇವೆ, ಪುಟ್ಟ ಕಂದನ ತುಂಟಾಟಕ್ಕೆ, ಸರ್ಕಸ್‌ಗೆ ನಮ್ಮ ಸ್ವಾಗತ. ನಿನ್ನ ತಂದೆ ರಾಮ್ ಕಳಾರಿ ನಿನ್ನನ್ನು ನೋಡಲು ಉತ್ಸುಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

2017ರಲ್ಲಿ ರಹಸ್ಯವಾಗಿ ಮದುವೆಯಾದ ಶ್ರುತಿಹರಿಹರನ್, ಕೇರಳದ ಖ್ಯಾತ ಡ್ಯಾನ್ಸ್ ಮಾಸ್ಟರ್ ರಾಮ್ ಅವರನ್ನು ವರಿಸಿಕೊಂಡಿರುತ್ತಾರೆ. ರಾಮ್ ಕೇರಳದ ಹೆಸರಾಂತ ಕಲೆ ಕಲರಿ ಪಟ್ಟ ನ್ನು ಕರಗತ ಮಾಡಿಕೊಂಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಮಿಂಚಿದ ಕಲಾವಿದ. ಶ್ರುತಿ ಹರಿಹರನ್ ಹಾಗೂ ರಾಮ್ ಕುಮಾರ್ ಮೊದಲಬಾರಿಗೆ ಪ್ರೇಮ ಎಂಬ ವಿಡಿಯೋ ಹಾಡಿನಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.
ಈ ಮೊದಲು ತನ್ನ ಮದುವೆಯ ವಿಚಾರವನ್ನು ಎಲ್ಲೂ ಪ್ರಸ್ತಾಪ ಮಾಡದ ನಟಿ ಶ್ರುತಿಹರಿಹರನ್ ಮೀಟೂ ಅಭಿಯಾನದ ಮೂಲಕ ನಟ ಅರ್ಜುನ್ ಸರ್ಜಾ ವಿರುದ್ದ ಆರೋಪ ಕೇಳಿ ಬಂದ ಸಂಧರ್ಭ ಪೋಲೀಸ್‌ರಲ್ಲಿ ದೂರು ನೀಡುವಾಗ ತನ್ನ ಮದುವೆಯಾದ ವಿಚಾರವನ್ನು ಬಹಿರಂಗ ಪಡಿಸಿದರು.
ಅರ್ಜುನ್ ಸರ್ಜಾ ವಿರುದ್ದ 5 ಪುಟಗಳಲ್ಲಿ ಸಲ್ಲಿಸಿದ್ದ ದೂರಿನಲ್ಲಿ ತಮ್ಮ ವಿಳಾಸದೊಂದಿಗೆ ತನ್ನ ಪತಿ ರಾಮ್ ಕುಮಾರ್ ಎಂದು ಬರೆದಿದ್ದರು.