News

ದೇವರಿಗಿಟ್ಟ ನಂದಾದೀಪ ಮನೆ ಮಗಳ ಪ್ರಾಣ ಕಸಿಯಿತು

ಬೆಳಗಾವಿ, ಜೂ 25 (Daijiworld News/MSP): ದೇವರಿಗಿಟ್ಟ ನಂದಾದೀಪವೂ ಮನೆ ಮಗಳ ಪ್ರಾಣಕ್ಕೆ ಎರವಾದ ಘಟನೆ ಬೆಳಗಾವಿಯ ಆನಿಗೋಳದಲ್ಲಿ ನಡೆದಿದೆ.

ಮನೆಯಲ್ಲಿ ದೇವರ ಫೋಟೋ ಮುಂದೆ ಹಚ್ಚಿಟ್ಟ ದೀಪವೂ ರಾತ್ರಿ ವೇಳೆ ಹಾಸಿಗೆಗೆ ತಗುಲಿದ ಕಾರಣ ಎಂಟು ವರ್ಷದ ಬಾಲೆ ಕಸ್ತೂರಿ ಸಜೀವವಾಗಿ ದಹನವಾಗಿದ್ದಾಳೆ.

ಈ ಘಟನೆಯೂ ಜೂ.24 ರ ಸೋಮವಾರ ರಾತ್ರಿ ನಡೆದಿದ್ದು,  ಘಟನೆಯಿಂದ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಎಲ್ಲರೂ ನಿದ್ರಾವಸ್ಥೆಯಲ್ಲಿದ್ದಾಗ ಈ ಘಟನೆ ನಡೆದಿದ್ದು, ದೀಪ ಕೆಳಗೆ ಬಿದ್ದು ಮಲಗಿದ್ದ ಹಾಸಿಗೆಗೆ ತಗುಲಿ ಬೆಂಕಿ ವ್ಯಾಪಿಸಿದೆ. ಆ ವೇಳೆ ಮನೆ ಮಂದಿ ಅಲ್ಪಸ್ವಲ್ಪ ಸುಟ್ಟ ಗಾಯಗಳೊಂದಿಗೆ ಪಾರಾದರೆ ಮನೆಮಗಳು ಮಾತ್ರ ಸಜೀವ ದಹನವಾಗಿದ್ದಾಳೆ. ಈ ಘಟನೆಯ ಬಗ್ಗೆ ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.