News

ಮೈಸೂರಿಗೆ ಬಂದ ಪುಟ್ಟ ರಾಜಕುಮಾರ: ಅಂಬಾವಿಲಾಸದಲ್ಲಿ ಮುಗಿಲು ಮುಟ್ಟಿದ ಸಂಭ್ರಮ


ಬೆಂಗಳೂರು ಡಿ 07 : ಮೈಸೂರಿಗೆ ಪುಟ್ಟ ರಾಜಕುಮಾರನ ಆಗಮನವಾಗಿದೆ. ಮೈಸೂರು ಮಹಾರಾಜ ಯದುವೀರ ಹಾಗೂ ರಾಣಿ ತ್ರಿಷಿಕಾ ಅವರಿಗೆ ಗಂಡು ಮಗುವಿನ ಜನನವಾಗಿದ್ದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಹಾಗೂ ನಗರದಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಡಿ.6 ರಾತ್ರಿ ರಾಣಿ ತ್ರಿಷಿಕಾ ಬೆಂಗಳೂರಿನ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತ್ರಿಷಿಕಾ ಕುಮಾರಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಅರಮನೆಯಲ್ಲಿ ಅಲಮೇಲಮ್ಮನ ಶಾಪವಿಮೋಚನೆಯಾಯಿತು ಎಂದು ಸಂಭ್ರಮಿಸಿದವರು ಹಲವರು. ರಾಜಮಾತೆ ಪ್ರಮೋದಾ ದೇವಿ ಆಸ್ಪತ್ರೆಯಲ್ಲೇ ಇದ್ದು ಆರೋಗ್ಯ ವಿಚಾರಿಸಿಕೊಂಡು ಮೊಮ್ಮಗ ಮತ್ತು ರಾಜಕುಮಾರನ ಆಗಮನದ ಖುಷಿ ಹಂಚಿಕೊಂಡರು. ಮಹಾರಾಜ ಯದುವೀರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.