News

ಹೆಗಲ ಮೇಲೆ ಹೆಂಡತಿಯ ಶವ ಸಾಗಿಸಿದ ವ್ಯಕ್ತಿಯ ಲಕ್ಕು ಬದಲಾಗಿದೆ ನೋಡಿ..

ಭುವನೇಶ್ವರ: ಆಂಬುಲೆನ್ಸ್ ಸಿಗದೇ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿಯ ಜೀವನದ ಗತಿಯೇ ಬದಲಾಗಿದೆ. ಹೊಸ ಹೆಂಡತಿ, ಹೊಸ ಮನೆ, ಹಾಗೂ ಹೊಸ ಬೈಕ್ ನೊಂದಿಗೆ ಜೀವನ ಸಾಗಿಸಲು ಸಿದ್ದತೆ ನಡೆಸಿಕೊಂಡಿದ್ದಾರೆ. ಕಳೆದ  ಆಗಸ್ಟ್ ನಲ್ಲಿ ಮಾಝಿ ಪತ್ನಿ ಅಮಾಂಗ್ ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದ್ರೆ ಮೃತ ದೇಹ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಪತ್ನಿಯ ಮೃತದೇಹವನ್ನ ಹೆಗಲ ಮೇಲೆ ಹೊತ್ತು, ಮಗಳೊಂದಿಗೆ 10 ಕಿ. ಮೀ ದೂರದವರೆಗೆ ನಡೆದಿದ್ದರು. ಈ ರೀತಿ ಸಾಗುತ್ತಿರುವ ಮಾಝಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ದೇಶವೇ ಮರುಕ ವ್ಯಕ್ತಪಡಿಸಿತ್ತು.ಹಲವು ಸಂಘಟನೆಗಳಿಂದ, ದೇಶ ವಿದೇಶಗಳಿಂದ ಮಾಝಿಗೆ ನೆರವು ನೀಡಿದ್ದವು. ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್ ಯೋಜನೆ ವತಿಯಿಂದ ಮನೆ ನಿರ್ಮಾಣ ಮಾಡಿಕೊಡುತ್ತಿದೆ. ಸದ್ಯ ಅವರು ಗ್ರಾಮದ ಅಂಗನವಾಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.ಇನ್ನು ಇವರ ಮೂವರು ಹೆಣ್ಣು ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡುತ್ತಿರುವ ಕಾರಣ ಮಕ್ಕಳು ಆ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿ ವಿದ್ಯಾಬ್ಯಾಸ ಮುಂದುವರಿಸಿದ್ದಾರೆ. ಈ ಮಧ್ಯೆ ಮಾಝಿ ಎರಡನೇ ಮದುವೆಯಾಗಿದ್ದಾರೆ. ಸದ್ಯ ಪತ್ನಿ ಗರ್ಭಿಣಿಯಾಗಿದ್ದಾರೆ. ಜತೆಗೆ ಹೊಸ ಮನೆಯ ಬಳಿಕ ಸುತ್ತಾಡಲು ಹೊಸ ಬೈಕ್ ಬೇಕು ಎಂದು 65 ಸಾವಿರ ಬೈಕು ಖರೀದಿಸಿದ್ದಾರೆ.. ಒಟ್ಟಾರೆ ಮಾಝಿಯ ಲಕ್ಕು ಬದಲಾಗಿದೆ.