News

ಟ್ರ್ಯಾಕ್ಟರಿಗೆ ಬಸ್ ಡಿಕ್ಕಿ : ಚಾಲಕ ಪ್ರಾಣಪಾಯದಿಂದ ಪಾರು

ಮಂಗಳೂರು ಡಿ 7: ಬೊಂದೆಲ್ ಚರ್ಚ್ ಮುಂದೆ ಡಿ 7 ರ ಗುರುವಾರ ಬೆಳಿಗ್ಗೆ ನಡೆದ ಬಸ್ ಹಾಗೂ ಟ್ರ್ಯಾಕ್ಟರ್ ನಡುವಿನ ಅಪಘಾತದಲ್ಲಿ ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪದವಿನಂಗಡಿಯಿಂದ ಬಂದ ಟ್ರ್ಯಾಕ್ಟರ್ ಪಚ್ಚನಾಡಿ ಕಡೆಗೆ ಹೋಗಲು ತಿರುವು ತೆಗೆದುಕೊಳ್ಳುತಿದ್ದಂತೆ ಬೊಂದೇಲಿನಿಂದ ಸ್ಟೇಟ್ ಬ್ಯಾಂಕಿಗೆ ತೆರಳುವ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಚಾಲಕ ಶಿವಾನಂದ(30) ಸಣ್ಣಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 


ಅಪಘಾತದಿಂದಾಗಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡೆಯುಂಟಾಗಿದ್ದು ,ಕದ್ರಿ ಟ್ರಾಫಿಕ್ ಪೋಲಿಸರು ಸ್ಥಳಕ್ಕಾಗಮಿಸಿ ಅಪಘಾತಕ್ಕೊಳಗಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.