News

ಬದಿಯಡ್ಕ: ಬೈಕ್ ಗಳ ಮುಖಾಮುಖಿ ಡಿಕ್ಕಿ, ಒರ್ವ ಮೃತ ಮತ್ತಿಬ್ಬರು ಗಂಭೀರ


ಕಾಸರಗೋಡು ಡಿ 7 : ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಯುವಕ ಮೃತಪಟ್ಟು , ಇಬ್ಬರು ಗಂಭೀರ ಗಾಯಗೊಂಡ ಘಟನೆ ಡಿ 6 ರ ಬುಧವಾರ ತಡ ರಾತ್ರಿ ಬದಿಯಡ್ಕ ಸಮೀಪದ ಮುಂಡ್ಯತ್ತಡ್ಕ ಗುಣಾಜೆ ಎಂಬಲ್ಲಿ ನಡೆದಿದೆ. ಮೃತಪಟ್ಟವನನ್ನು ಬನ್ಪುತ್ತಡ್ಕದ ಮುಹಮ್ಮದ್ ಮಿದ್ ಲಾಜ್ ( 18 ) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಮಿದ್ ಲಾಜ್ ನನ್ನು ನಾಗರಿಕರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತದರೂ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ಅಪಘಾತದಿಂದ ಇನ್ನೊಂದು ಬೈಕ್ ನಲ್ಲಿದ್ದ ಮುಂಡ್ಯತ್ತಡ್ಕದ ಅವಿನಾಶ್ ಹಾಗೂ ಮುತ್ತು ಎಂಬವರು ಗಂಭೀರ ಗಾಯಗೊಂಡಿದ್ದು , ಅವಿನಾಶ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಮುತ್ತು ನನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡ್ಯತ್ತಡ್ಕ ಮಸೀದಿಯಿಂದ ಮನೆಗೆ ತೆರಳುತ್ತಿದ್ದಾಗ ಮಿದ್ ಲಾಜ್ ಸಂಚರಿಸುತ್ತಿದ್ದ ಬೈಕ್ ಮತ್ತು ಇನ್ನೊಂದು ಬೈಕ್ ನಡುವೆ ಅಪಘಾತ ನಡೆದಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.