News

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಉರುಳಿದ್ದು ಮಸೀದಿ ಅವರಣಕ್ಕೆ.!


ಕಾಸರಗೋಡು ಡಿ 06 : ನಿಯಂತ್ರಣ ತಪ್ಪಿದ ಕಾರು ಮಸೀದಿ ಆವರಣಕ್ಕೆ ಬಿದ್ದು ಗೋಡೆ ಬಿರುಕು ಬಿಟ್ಟ ಘಟನೆ ಡಿ 6 ರ ಬುಧವಾರ ಚೆರ್ಕಳ ದಲ್ಲಿ ನಡೆದಿದೆ.ಪರಿಣಾಮ ಕಾರು ಚಾಲಕ ಕೋಝಿಕ್ಕೋಡ್ ನ ರೆನಿಲ್ ಶೇಖರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಅತೀ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮಂಗಳೂರಿನಿಂದ ಕೋಝಿಕ್ಕೋಡ್ ಗೆ ತೆರಳುತ್ತಿದ್ದ ಕಾರು ದಾರಿ ತಪ್ಪಿ ಒಳ ರಸ್ತೆಯಲ್ಲಿ  ಸಾಗುತ್ತಿದ್ದಾಗ ಅಪಘಾತ ನಡೆದಿದ್ದು , ರಸ್ತೆ ಯಿಂದ ಉರುಳಿದ ಕಾರು ಮಸೀದಿ ಆವರಣಕ್ಕೆ ಉರುಳಿ ಬಿದ್ದಿದ್ದು , ಗೋಡೆ, ಮಸೀದಿಗೆ ಹಾನಿಗೊಂಡಿದೆ.