News

ಮೋದಿಯ ಶಿಷ್ಯರಿಂದ ಧರ್ಮದ ಹೆಸರಲ್ಲಿ ಹಿಂಸಾಚಾರ ಸೃಷ್ಟಿ – ಸಚಿವ ರೈ ಕಿಡಿ

ಮಂಗಳೂರು, ಡಿ 6: ಪ್ರಧಾನಿ ಮೋದಿಯ ಶಿಷ್ಯರು ದೇವರು, ದೇಶಪ್ರೇಮ ಎನ್ನುತ್ತಾ ಧರ್ಮದ ಮೂಲಕ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಿಡಿ ಕಾರಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಮೋದಿ ಧರ್ಮದ ಮೂಲಕ ಹಿಂಸಾಚಾರ ಮಾಡಬೇಡಿ ಎಂದು ದೇಶ ವ್ಯಾಪಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಅವರ ಶಿಷ್ಯರು ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೈಸೂರು ಸಂಸದ ಪ್ರತಾಪ್ ಸಿಂಹ ಕಾನೂನು ಬಿಟ್ಟು ಎತ್ತರಕ್ಕೆ ಬೆಳೆದವರು. ಸಂಸದರಿಗೆ ಕಾನೂನು ಗೊತ್ತಿಲ್ಲ. ಕಾನೂನು ಗೊತ್ತಿಲ್ಲದಿದ್ದರೆ ಇಲ್ಲಿ ಬದುಕುತ್ತಿರುವ ಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದರು. ಹಾಗಾಗಿ ಇಂತಹ ಶಿಷ್ಯರಿಗೆ ಎಂದಿಗೂ ಸಾಮಾನ್ಯರು ಮಣೆ ಹಾಕಬಾರದು ಎಂದು ತಿಳಿಸಿದರು.

ಹನುಮಜಯಂತಿ ಆಚರಣೆಯ ವೇಳೆ ಸಂಸದರು ಸರಕಾರದ ಅಧಿಕೃತ ವಾಹನವನ್ನು ಚಾಲಕನ ಬದಲು ತಾನೇ ಖುದ್ಧಾಗಿ ಚಲಾಯಿಸಿದ್ದಾರೆ. ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬ್ಯಾರಿಕೇಡ್ ಮುರಿದು ವಾಹನವನ್ನು ಚಲಾಯಿಸಿಕೊಂಡು ಹೋಗಿರುವುದು ದೊಡ್ಡ ಅಪರಾಧ ಎಂದು ಸಚಿವರು ಹೇಳಿದರು.