News

ಕಾಸರಗೋಡು: ಸೋಡಾ ಫ್ಯಾಕ್ಟರಿಯಲ್ಲಿ ಸಿಕ್ತು ಅಕ್ರಮ ಮದ್ಯ


ಕಾಸರಗೋಡು ಡಿ 06 : ಸೋಡಾ ಮೇಕಿಂಗ್ ಫ್ಯಾಕ್ಟರಿಯ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 180 ಮಿ.ಲೀ 22 ಬಾಟಲಿ ಮದ್ಯವನ್ನು ಅಬಕಾರಿ ಇಲಾಖೆ ವಶ ಪಡಿಸಿಕೊಂಡಿದೆ. ಕುಂಬಳೆ ದೇವಸ್ಥಾನ ದ ರಸ್ತೆಯಲ್ಲಿರುವ ಮದ್ಯದಂಗಡಿ ಯೊಂದರ ಹಿಂಭಾಗದಲ್ಲಿರುವ ಸೋಡಾ ತಯಾರಿ ಫ್ಯಾಕ್ಟರಿಯ ಗೋದಾಮಿ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಸೋಡಾ ತಯಾರಿ ಘಟಕದ ಮಾಲಕ ಕೊಯಿಪ್ಪಾಡಿ ಶೇಡಿಗುಮ್ಮೆ ನಿವಾಸಿ ರಮೇಶ್.ಕೆ (47) ಎಂದು ಗುರುತಿಸಲಾಗಿದೆ. ಡಿ 5 ರ ಮಂಗಳವಾರ ರಾತ್ರಿ ಅಬಕಾರಿ ವಿಶೇಷ ದಳದ ಇನ್‌ಸ್ಪೆಕ್ಟರ್ ಶಿಜು ಹಾಗೂ ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದಲ್ಲಿ ಈ ದಾಳಿ ನಡೆಸಿ ಕರ್ನಾಟಕ ನಿರ್ಮಿತ ಮದ್ಯಗಳನ್ನು ವಶಪಡಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸವರ್ಷಾಚರಣೆ ಮುಂದಿರೋದ್ರಿಂದ ಅಕ್ರಮ ಮದ್ಯ ಮಾರಾಟವೂ, ಸಾಗಾಟ, ದಾಸ್ತಾನು ಹೆಚ್ಚಳವಾಗುತ್ತಿದ್ದು ಈ ಹಿನ್ನಲೆಯಲ್ಲಿ ದಾಳಿ ತೀವ್ರಗೊಳಿಸುವುದಾಗಿ ಅಬಕಾರಿ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ.