News

ಇಂಡಿಯಾ, ಪಾಕಿಸ್ತಾನ ಕದನಕ್ಕೆ ಕ್ಷಣಗಣನೆ - 'ಜಯಿಸಿ ಬನ್ನಿ' ಎಂದು ಭಾರತಕ್ಕೆ ಶುಭ ಕೋರಿದ ಸಿಎಂ

ಬೆಂಗಳೂರು, ಜೂ16(Daijiworld News/SS): ವಿಶ್ವದೆಲ್ಲೆಡೆಯ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನ ಭಾರತ ಹಾಗೂ ಪಾಕಿಸ್ತಾನ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾರತ ತಂಡಕ್ಕೆ ಶುಭಾಶಯ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಆಲ್‌ ದಿ ಬೆಸ್ಟ್ ಟೀಮ್ ಇಂಡಿಯಾ. ಜಯಿಸಿ ಬನ್ನಿ ಎಂದು ಶುಭಾಶಯ ಕೋರಿದ್ದಾರೆ.

ಇಂದು ಏಳನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದೆ. ಈ ಹಿಂದಿನ ಆರು ಪಂದ್ಯಗಳಲ್ಲೂ ಭಾರತವೇ ಗೆಲುವು ದಾಖಲಿಸಿತ್ತು. ಎಲ್ಲ ಹಂತದಲ್ಲೂ ಸಮತೋಲಿತ ತಂಡವನ್ನು ಹೊಂದಿರುವ ವಿರಾಟ್ ಕೊಹ್ಲಿ ಪಡೆ ಇಲ್ಲೂ ಫೇವರಿಟ್ ಎನಿಸಿಕೊಂಡಿದೆ.

ಮ್ಯಾಂಚೆಸ್ಟರ್‌ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಏಕದಿನ ಪಂದ್ಯ ಇಂದು ನಡೆಯಲಿದೆ. ಭಾನುವಾರ ಮಧ್ಯಾಹ್ನ 3ಗಂಟೆಗೆ ಪಂದ್ಯ ಆರಂಭವಾಗಲಿದೆ. ಇಡೀ ವಿಶ್ವವೇ ಈ ಪಂದ್ಯವನ್ನು ಎದುರು ನೋಡುತ್ತಿದೆ.

ಪಂದ್ಯಕ್ಕೆ ವರುಣನ ಕೃಪೆ ಬರುವ ಸಾಧ್ಯತೆಯಿದೆ. ತಾಜಾ ವರದಿಯಂತೆ ವಾತಾವರಣ ಶುಭ್ರವಾಗಿದ್ದು, ಪಂದ್ಯ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.