News

ಭಯೋತ್ಪಾದನೆ ಸಂಘಟನೆಯ ಶಿಬಿರಗಳ ಮೇಲೆ ಜಂಟಿಯಾಗಿ ದಾಳಿ ನಡೆಸಿದ ಭಾರತ-ಮ್ಯಾನ್ಮಾರ್​

ನವದೆಹಲಿ, ಜೂ16(Daijiworld News/SS): ಭಾರತ ಮತ್ತು ಮ್ಯಾನ್ಮಾರ್​ ಜಂಟಿಯಾಗಿ ಸೇರಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ಶಿಬಿರಗಳ ಮೇಲೆ ದಾಳಿ ನಡೆಸಿವೆ.

ಸನ್​ಶೈನ್​-2 ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್​ನ ಗಡಿಯೊಳಗೆ ಅಡಗಿಕೊಂಡಿದ್ದ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ವಿಶೇಷ ಪಡೆಗಳು, ಅಸ್ಸಾಂ ರೈಫಲ್ಸ್​ ಮತ್ತು ಇನ್ಫೆಂಟ್ರ ಘಾತಕ್ಸ್​ ಸೇರಿ ಭಾರತೀಯ ಸೇನಾಪಡೆಯ ಎರಡು ಬೆಟಾಲಿಯನ್​ ಯೋಧರು ಮತ್ತು ಮ್ಯಾನ್ಮಾರ್​ ಸೇನಾಪಡೆಯ ನಾಲ್ಕು ಬ್ರಿಗೇಡ್​ಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದವು ಎಂದು ತಿಳಿದುಬಂದಿದೆ.

ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರರನ್ನು ಭಾರತೀಯ ಸೇನಾಪಡೆಯ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮೇ 16ರಿಂದ ಜೂನ್​ 8ರ ನಡುವೆ ಭಾರತ ಮತ್ತು ಮ್ಯಾನ್ಮಾರ್​ ಸೇನಾಪಡೆ ಯೋಧರು ಸಂಯೋಜಿತವಾಗಿ ಈ ದಾಳಿಗಳನ್ನು ಸಂಘಟಿಸಿದ್ದರು. ಈ ಹಿನ್ನಲೆಯಲ್ಲಿ, ಭಾರತ ಮತ್ತು ಮ್ಯಾನ್ಮಾರ್​ ಜಂಟಿಯಾಗಿ ಸೇರಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಸಂಘಟನೆಗಳ ಶಿಬಿರಗಳ ಮೇಲೆ ದಾಳಿ ನಡೆಸಿವೆ.