News

ಅಯ್ಯಪ್ಪ ಸ್ವಾಮಿಯ ಹಾಡಿಗೆ ಹೊಸ ಸಾಹಿತ್ಯ – ಬಾವಾ ಹಾಡಿನ ರಾಜಕೀಯಕ್ಕೆ ಹಿಂದೂ ಸಂಘಟನೆಗಳು ಗರಂ

ಮಂಗಳೂರು, ಮಾ 9: ಮುಂಬರುವ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಪ್ರಚಾರ ಮಾಡುವ ಭರದಲ್ಲಿ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಎಡವಟ್ಟು ಮಾಡಿಕೊಂಡಿದ್ದಾರೆ.

ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಹಾಡಿನ ಮೂಲಕ ಹೊರಹಾಕಿದ್ದಾರೆ. ಆದರೆ ತಮ್ಮನ್ನು ಹೊಗಳುವ ಹಾಡು ರಚಿಸುವ ಭರದಲ್ಲಿ ಹಿಂದೂಗಳ ಪವಿತ್ರ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಯ ಗೀತೆಯನ್ನು ವಿರೂಪ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಸಿದ್ಧ ದೇವರ ಗೀತೆಯೊಂದನ್ನು ತಮ್ಮ ಕೀಳು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಹಿಂದೂ ಇರುವ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲು ಮುಳ್ಳು ಪಾದಕ್ಕೆ ಹೂವು ಅನ್ನೋ ಅಯ್ಯಪ್ಲ ಸ್ವಾಮಿಯ ಪ್ರಸಿದ್ಧ ಗೀತೆಯೊಂದರ ಸಂಗೀತವನ್ನು ನಕಲಿ ಮಾಡಿ ಕಲ್ಲು ಮುಳ್ಳು ತೋಜುನೆ ಇಜ್ಜಿ ಅನ್ನೋ ತುಳು ಸಾಹಿತ್ಯದ ಮೂಲಕ ಗೀತೆ ರಚಿಸಿ ವೈರಲ್ ಮಾಡಿದ್ದಾರೆ. ಈಗಾಗಲೇ ಹಲವು ತುಳು ಪ್ರಚಾರ ಗೀತೆಗಳನ್ನು ರಚಿಸಿರುವ ಬಾವಾ, ತಮ್ಮ ಕ್ಷೇತ್ರದಲ್ಲಿ ಈ ಮೂಲಕ ಪ್ರಚಾರ ನಡೆಸಿದ್ದು, ಈ ಗೀತೆಗಳು ವೈರಲ್ ಆಗಿದೆ.

ಇದರಿಂದ ಆಕ್ರೋಶಗೊಂಡಿರುವ ಹಿಂದೂಗಳು ಅಯ್ಯಪ್ಪ ಸ್ವಾಮಿಗೆ ಅವಹೇಳನ ಮಾಡಲಾಗಿದೆ ಎನ್ನುವ ಆರೋಪ ಮಾಡಿದ್ದಾರೆ. ಇದೀಗ ಬಾವಾ ಮಾಡಿಕೊಂಡಿರುವ ಎಡವಟ್ಟು ವಿವಾದಕ್ಕೆ ಕಾರಣವಾಗಿದೆ.