News

ಬೆಳ್ತಂಗಡಿ: ಚಾಲಕನ ನಿರ್ಲಕ್ಷ್ಯದಿಂದ ಓಮಿನಿಗೆ ಪಿಕಪ್ ಡಿಕ್ಕಿ-ಇಬ್ಬರು ಗಂಭೀರ

ಬೆಳ್ತಂಗಡಿ, ಆ 25 (DaijiworldNews/SM): ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ರವಿವಾರ ಉಜಿರೆ ಸಮೀಪ ನಡೆದಿದೆ. ಓಮಿನಿ ಚಾಲಕ ನಾವೂರಿನ ಕೊಡಿಕ್ಕಾರು ಹರೀಶ್(34), ಕೊರಗಪ್ಪ ಕುಂಬಾರ(67) ಗಂಭೀರ ಗಾಯಗೊಂಡವರು.

ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯಲ್ಲಿ 7 ವರ್ಷದ ಮನ್ವಿತ್ ಸಹಿತ ಮೋಹಿನಿ, ಲಿಂಗಪ್ಪ, ಮೋಹನ ಸಣ್ಣಪುಟ್ಟ ಗಾಯಗೊಂಡಿದ್ದು, ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾವೂರು ಕೊಡಿಕ್ಕಾರು ನಿವಾಸಿಗಳಾದ ಒಂದೇ ಕುಟುಂಬದ 7 ಮಂದಿ ಓಮಿನಿಯಲ್ಲಿ ಧರ್ಮಸ್ಥಳಕ್ಕೆ ತೆರಳಿ ಹಿಂದಿರುವಾಗ ಉಜಿರೆಯಿಂದ ಧರ್ಮಸ್ಥಳ ತೆರಳುತ್ತಿದ್ದ ಪಿಕಪ್ ಓವರಟೇಕ್ ಮಾಡುವ ಭರದಲ್ಲಿ ಪಲ್ಟಿಯಾಗಿದೆ. ಪಿಕಪ್ ಪಲ್ಟಿಯಾಗಿ ರಸ್ತೆಯಲ್ಲೆ ಜಾರಿಕೊಂಡು ಓಮಿನಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಓಮಿನಿ ಚಾಲಕ ಹರೀಶ್ ಹಾಗೂ ತಂದೆ ಕೊರಗಪ್ಪ ಕುಂಬಾರ ಅವರ ತಲೆ, ಹೊಟ್ಟೆ, ಕಾಲಿಗೆ ಗಂಭೀರ ಗಾಯವಾಗಿದೆ. ಪಿಕಪ್ ಚಾಲಕ ಸುನಿಲ್ ಅಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.